ಡಾ. ವಸು ಮಳಲಿ ಅವರು ಇತಿಹಾಸ ಪ್ರಾಧ್ಯಾಪಕಿ, ಕನ್ನಡ ಲೇಖಕಿ, ಅಂಕಣಕಾರ್ತಿ, ಚಿಂತಕಿ ಹಾಗೂ ಸಿನಿಮಾ ನಿರ್ದೇಶಕಿ. ಅವರು ಕನ್ನಡ ಸಾಹಿತಿ ಮಳಲಿ ವಸಂತ ಕುಮಾರ್ ಹಾಗು ಶಾಂತ ವಸಂತಕುಮಾರ್ ಅವರ ಹಿರಿಯ ಪುತ್ರಿ. == ಶಿಕ್ಷಣ == ವಸು ಮಳಲಿಯವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ. ಪದವಿ ಪಡೆದಿದ್ದರು. == ವೃತ್ತಿಜೀವನ == ಡಾ. ವಸು ಮಳಲಿಯವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. == ಕೃತಿಗಳು == ಪ್ರಜಾವಾಣಿ ಪತ್ರಿಕೆಯಲ್ಲಿ 'ಕಳ್ಳುಬಳ್ಳಿ' ಅಂಕಣದಿಂದ ಜನಪ್ರಿಯರಾಗಿದ್ದ ವಸು ಮಳಲಿಯವರು ಕೆಳಕಂಡ ಕೃತಿಗಳನ್ನು ರಚಿಸಿದ್ದಾರೆ/ಸಂಪಾದಿಸಿದ್ದಾರೆ. ಮೌಖಿಕ ಇತಿಹಾಸ,ಅಂಕಿತ ಪ್ರಕಾಶನ, ೨೦೦೪. ದಕ್ಷಿಣ ಕರ್ನಾಟಕದ ಅರಸು ಮನೆತನಗಳು(ಸಂ), ಕನ್ನಡ ವಿಶ್ವವಿದ್ಯಾಲಯ,ಹಂಪಿ,೨೦೦೨. ಕರ್ನಾಟಕ ಚರಿತ್ರೆಯ ಕೆಲವು ಆಯ್ದ ವಿಷಯಗಳು, ಕನ್ನಡ ವಿಶ್ವವಿದ್ಯಾಲಯ,ಹಂಪಿ,೨೦೦೬. ಕನ್ನಡದೊಳ್ ಭಾವಿಸಿದ ಜನಪದಂ(ಸಂ.), ಕರ್ನಾಟಕ ಇತಿಹಾಸ ಪರಿಷತ್ತು, ೨೦೦೯. == ಸಿನಿಮಾ == ಹಾಲಿವುಡ್‍ನಲ್ಲಿ ನಿರ್ದೇಶನದ ತರಬೇತಿ ಪಡೆದಿದ್ದ ವಸು ಮಳಲಿಯವರು ನಕ್ಸಲ್ ನಾಯಕ ಸಾಕೇತ ರಾಜನ್ ಜೀವನ ಆಧರಿಸಿದ 'ಶಸ್ತ್ರ' ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ನಟ ಕಿಶೋರ್ ಮುಖ್ಯ ಪಾತ್ರದಲ್ಲಿದ್ದಾರೆ. == ಚಿತ್ರ ಶಾಲೆ == == ವಿದಾಯ == ವಸು ಮಳಲಿಯವರು ಫೆಬ್ರವರಿ 3, 2015ರಂದು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಹೃದಯಾಘಾತದಿಂದ ನಿಧನರಾದರು. ಅದಕ್ಕೂ ಮುಂಚೆ ಅವರು ಸ್ತನ ಕ್ಯಾನ್ಸರ್‍ಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದರು. == ಬಾಹ್ಯ ಕೊಂಡಿಗಳು == ವಸು ಮಳಲಿ ಅವರ "ಕಳ್ಳುಬಳ್ಳಿ ಅಂಕಣಗಳು" ವಸು ಮಳಲಿ ಕುರಿತು ಡಾ.ನಟರಾಜ್ ಹುಳಿಯಾರು ಅವರ ಲೇಖನ 2015-02-21 ವೇಬ್ಯಾಕ್ ಮೆಷಿನ್ ನಲ್ಲಿ. ಮಳಲಿ ಕುರಿತು ಕೆ.ನೀಲಾ ಅವರ ಲೇಖನ ವಸು ಮಳಲಿ ಕುರಿತು ಬೇಲೂರು ರಘುನಂದನ ಅವರ ಲೇಖನ